
ರಘುಪತಿ ಶೃಂಗೇರಿ ನಮ್ಮ ನಾಡಿನ ಸುಪ್ರಸಿದ್ದ
ವ್ಯಂಗ್ಯಚಿತ್ರಕಾರರಲ್ಲೊಬ್ಬರು.ಸುಮಾರು ೨೮ ವರುಷಗಳಿಂದ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ, ಅನೇಕ ಮಾಧ್ಯಮಗಳಲ್ಲಿ ೧೫೦೦೦ ಹೆಚ್ಚು ಕಾರ್ಟೂನ್, ಕ್ಯಾರಿಕೇಚರ್ ಮುಂತಾದುವುಗಳನ್ನು ರಚಿಸಿದ ಹೆಗ್ಗಳಿಗೆ ಇವರದ್ದು.
ಇತ್ತೀಚಿಗೆ ಜನಪ್ರಿಯತೆ ಗಳಿಸಿದ, ಹಲವಾರು ದಿಗ್ಗಜರು ಹೊಗಳಿ, ಬಳಸಿದ, ಭಾರತದ ನಕ್ಷೆ ಇಸ್ರೊವಿಗೆ "ಇಡೀ ದೇಶ ನಿಮ್ಮೊಂದಿಗೆ ಇದೆ" ಎಂಬ ಸಂದೇಶ ನೀಡಿದ ಕೃತಿ ಇವರದ್ದು.ಇದು ಪ್ರಧಾನ ಮಂತ್ರಿಯವರು ಇಸ್ರೊ ಅಧ್ಯಕ್ಷರನ್ನು ತಬ್ಬಿ ಸಂತೈಸುತ್ತಿದ್ದ ಸಂದರ್ಭವನ್ನು ಆಧಾರಿಸಿ ರಚಿಸಿದ ಕಾರ್ಟೂನ್.
ಶೃಂಗೇರಿಯಲ್ಲಿ ಶೃಂಗೇಶ್ವರ ರಾವ್, ಯಶೋದದಂಪತಿಗಳಿಗೆ ಜನಿಸಿ, ಫ಼ನ್ ಆರ್ಟ್ಸ್ ಪದವಿ ಪಡೆದ ಇವರುಮೊಟ್ಟ ಮೊದಲ ಬಹುಮಾನ ಗೆದ್ದದ್ದು ೧೯೯೬ರಲ್ಲಿ, ಕೊರಿಯಾದೇಶ ಆಯೋಜಿಸಿದ ಪ್ರಪಂಚಮಟ್ಟದ ಸ್ಪರ್ಧೆಯಲ್ಲಿ.
ಅದಾದನಂತರ ಹಲವಾರು ಬಹುಮಾನಗಳು, ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ. ಅಷ್ಟಲ್ಲದೆ ಕಾರ್ಟೂನ್ ಸ್ಪರ್ಧೆಗಳಿಗೆನಿರ್ಣಾಯಕರಾಗಿ, ಕರ್ನಾಟಕ ಕಾರ್ಟೂನಿಸ್ಟ್ ಸಂಘದಕಾರ್ಯದರ್ಶಿಗಳಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.